ಅಕಾಲ ಪ್ರೀತಿ
ನಾ ಕದ್ದ ಕವನದಂತೆ
ಅವರ ಪ್ರೀತಿ ಅಕಾಲದಲಿ
ಮೊಳೆತಿದೆ
ಬಿಟ್ಟ ಬೇರು ಹಿಡಿದಿಟ್ಟಿದೆ
ನೆಲವ ಬಿಟ್ಟು ಬೇರಾಗದಂತೆ
ಬೇರಿಗೆ ಮತ್ತಷ್ಟು ಬೇರು
ಬಿಟ್ಟು
ರೆಂಬೆಯ ಮೇಲಷ್ಟು ರೆಂಬೆ
ಬೆಳೆದಿದೆ
ಕನಸಲ್ಲಿ ಕನಸು ಬಿದ್ದು
ಮನಸು ಮುರಿದ ಮನೆಯಾಗಿದೆ
ಬೆಳೆದ ರೆಂಬೆಗೆ ಮೋಡ
ಕಾಣಲು
ಬಲಿತ ಬೇರಿಗೆ ನೀರು
ಸಿಕ್ಕಿದೆ
ಅವರ ಪ್ರೀತಿ ಅಕಾಲದಲ್ಲಿ
ಮೊಳೆತಿದ್ದು
ನಾ ಕದ್ದ ಕವನದಂತೆ
ದೇಹ ಬಾಡಿಗೆಗೆ ಸಿಗುವಂತೆ
ಕಣ್ಣಲ್ಲಿ ಕಣ್ಣಿಟ್ಟು ನೋಡದವರಿಗೆ
ಪ್ರೀತಿಯ ಕತ್ತಿಗೆ ಕುಣಿಕೆ
ಬಿಗಿದು
ನೆತ್ತಿಗೆ ಮುತ್ತಿಟ್ಟು ಮುದ್ದಾಡಬಹುದೆ
ಎಲೆಯೆಲ್ಲ ಬಿರು-ಗಾಳಿಗೆ
ಸಿಲುಕಿರೆ
ರೆಂಬೆ ತಾನು ನೃತ್ಯಗೈದಿದೆ
ನೆರೆಬಂದು ಮಣ್ಣೆಲ್ಲ ಕೊಚ್ಚಿಹೋದರೂ
ಬೇರು ನಿಂತ ನೀರ
ಹೀರಿದೆ
ಅಕಾಲದಲ್ಲಿ ಮೊಳೆವ ಪ್ರೀತಿ
ಕದ್ದ ಕವನದಂತೆ
ಬೆಳೆದು ಮೇಲೆದ್ದರೂ ಬದುಕುವುದಿಲ್ಲ
ಬದುಕಿದರೂ ಅದು ಬದುಕಲ್ಲ
---- 13-03-2013