Thursday, March 29, 2012

ಕರಾಮತ್ತಿಗೋಸ್ಕರ..


ಕರಾಮತ್ತಿಗೋಸ್ಕರ...


ಕರಾಮತ್ತಿಗೋಸ್ಕರ,
ಬಲಿತ ಕಾಲುಗಳು
ಕೆಂಡ ಹಾಯುತ್ತವೆ
ಪ್ರತಿದಿನವಲ್ಲ 
ಒಮ್ಮೊಮ್ಮೆ ಮಾತ್ರ
ಇಂದು ಹಾಯ್ದ ಸೋಮ ಮಾತ್ರ
ನಾಳೆಗೂ ಬಂದಿದ್ದ
ಕೆಂಡ ಸುಟ್ಟಿರಲಿಲ್ಲ
ನಿನ್ನೆ ರಾತ್ರಿ ಹೊಯ್ದ ಮಳೆ
ತಾನೇ ತಂಪಗೆ 
ನಿಂತ ನೀರ ಹೀರುತ್ತ


ಕೆಂಡ ಹಾಯ್ವ ಜಾಗದಲ್ಲೇ
ಕಂಡೇ ಕಂಡಿತು ಸೋಮನಿಗೆ
ನಿಂತ ನೀರ ಕೆಸರಲ್ಲೇ
ಆಲದೆಲೆಗಳ ಈಜಾಟ


ಆಲದೆಲೆ ಆಲಕ್ಕರಿವಿರದೇ
ತಾನುದುರಿ ಹೋದಾಗ
ಆಲಕ್ಕೇನೋ ಮರುಕ-
ಅಯ್ಯೋ, ಈ ಎಲೆ ತೊರೆದು ಎನ್ನ
ನೆಲಕಚ್ಚಿಹೋಯಿತಲ್ಲ!
ಆಲ ಮರೆತಿದೆ-
ತಾನ್ ನೆಲವ ಕಚ್ಚಿಕೊಂಡಿರುವುದನ್ನ,
ಹಾರುವ ಹಕ್ಕಿ ಮರೆತಂತೆ
ಗಾಳಿಯುಯ್ಯಾಲೆಯಲ್ಲಿ ತಾನಿರುವುದನ್ನ


ನಾವ್ ಮರೆತಂತೆ
ನಮ್ಮೊಳಗೆ ನಾವಿರುವುದನ್ನ !

1 comment: